New Age Islam
Mon Jul 22 2024, 04:39 PM

Kannada Section ( 15 Aug 2020, NewAgeIslam.Com)

Comment | Comment

Bengaluru Muslim Violence ಬೆಂಗಳೂರು ಮುಸ್ಲಿಂ ಹಿಂಸೆ: ಈಶ್ವರನ ಅಥವಾ ಧರ್ಮನಿಂದೆಯ ಕುರಿತು ಇಸ್ಲಾಮಿಕ್ ದೇವತಾಶಾಸ್ತ್ರದ ಒಮ್ಮತವನ್ನು ಪ್ರಶ್ನಿಸುವ ಅವಶ್ಯಕತೆಯಿದೆ


By Arshad Alam, New Age Islam

ಅರ್ಶದ ಆಲಮರಿಂದ, ನ್ಯೂ ಏಜ್ ಇಸ್ಲಾಂ

12 ಅಗಸ್ಟ್ 2020  

 ಇಸ್ಲಾಂ ಧರ್ಮದ ಪ್ರವಾದಿಯ ಕುರಿತು ಅಪಮಾನಾಸ್ಪದ ಫೇಸ್ಬುಕ್ ಪೋಸ್ಟ್ ಬಗ್ಗೆ ಬೆಂಗಳೂರಿನ ಮುಸ್ಲಿಮರು ತೀವ್ರ ಗಲಭೆಯನ್ನು ಮಾಡಿದ್ದಾರೆ. ಅಂದಿನಿಂದ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ, ಅದನ್ನು ಬರೆದ ವ್ಯಕ್ತಿಯನ್ನು ಬಂಧಿಸಲಾಗಿದೆ ಆದರೆ ಅಮೂಲ್ಯವಾದ ಆಸ್ತಿ ನಾಶವಾದ ಮತ್ತು ಮೂರು ಜನರು ಪ್ರಾಣ ಕಳೆದುಕೊಂಡ ನಂತರ. ಜನಸಮೂಹವುಆರೋಪಿಯಾದ, ದಲಿತ ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕರ ಸಂಬಂಧಿಯೊಬ್ಬರ ಮನೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಕೆಲವರು ಕಾತುರದಿಂದ ನಿರೀಕ್ಷಿಸಿದ ದಲಿತ ಮುಸ್ಲಿಂ ಐಕ್ಯತೆಯ ಎಲ್ಲ ಭರವಸೆಗಳು ಸುಟ್ಟು ಹೋದವು. ಮುಸ್ಲಿಂ ಕೋಪವು ಪ್ರವಾದಿಯ ನಿರಾಕರಣೆಗೆ ವಿರುದ್ಧವಾಗಿಲ್ಲ, ಆದರೆ ಕಡಿಮೆ ಜಾತಿಯ ವ್ಯಕ್ತಿಯು ಇದನ್ನು ಮಾಡಿದ ಕಾರಣವಾಗಿದೆ ಎಂಬ ವಾದವಾಗಿ ಇದನ್ನು ತಿರುಗಿಸುವ ಸಾಕಷ್ಟು ಜನರಿದ್ದಾರೆ. ಆರೋಪವನ್ನು ಮುಸ್ಲಿಮರು ಎಷ್ಟೇ ನಿರಾಕರಿಸಿದರೂ, ಅವರ ಸಮಾಜದಲ್ಲಿಯ ಜಾತೀಯವಾದವು ಅವರನ್ನು ಇತರ ಧಾರ್ಮಿಕ ಗುಂಪುಗಳಿಗಿಂತ ಭಿನ್ನವಾಗಿಸುವುದಿಲ್ಲ ಎಂಬ ಸತ್ಯವು ಉಳಿಯುತ್ತದೆ.

Also Read:   Blasphemy Law has NO Qur’anic Basis

 

According to police, a crowd of almost a thousand people gathered in front of the KG Halli police station demanding that a Congress MLA's relative named Naveen be arrested.

-----

ಅಯೋಧ್ಯೆಯ ರಾಮ ದೇವಸ್ಥಾನದ ಭೂಮಿ ಪೂಜೆಯ ನಂತರ ಘಟನೆ ನಡೆದಿದೆ. ಅನೇಕರು ಘಟನೆಯನ್ನು ಭಾರತದಲ್ಲಿ ಹಿಂದೂ ರಾಜ್ಯ ಸ್ಥಾಪನೆಯ ನಾಂದಿಯೆಂದು ಘೋಷಿಸಿದರು ಮತ್ತು ಮುಸ್ಲಿಮರ ಭವಿಷ್ಯದ ಬಗ್ಗೆ ಪ್ರತ್ಯಕ್ಷವಾಗಿ ಮತ್ತು ಅರ್ಥವಾಗುವಂತೆ ಕಾಳಜಿ ವಹಿಸಿದ್ದರು. ಆದರೆ, ಬೆಂಗಳೂರಿನಲ್ಲಿ ಗಲಭೆಯ ಜನಸಮೂಹವು ಮುಸ್ಲಿಮರು ಇಂದು ಬದಲಾದ ರಾಜಕೀಯ ಸಂದರ್ಭಗಳಿಗೆ ತಮ್ಮನ್ನು ತಾವು ಕಂಡುಕೊಂಡಿರುವ ಬಗೆಗೆ ಯಾವುದೇ ಸೂಕ್ಷ್ಮತೆಯನ್ನು ತೋರಿಸಿಲ್ಲ. ಖಂಡಿತವಾಗಿಯೂ ಇದು ಕೆಲವರು ಚಿತ್ರಿಸಲು ಬಯಸುವಭಯಭೀತ ಮುಸ್ಲಿಮರ ಚಿತ್ರವಲ್ಲ. ಮುಸ್ಲಿಂ ಭಾವನೆಗಳಿಗೆ ನೋವಾಗಿದೆ ಎಂದು ಸಮ್ಮತಿಸೋಣ, ಆದರೆ ಅವರ ಕುಂದುಕೊರತೆಗಳನ್ನು ತೋರಿಸಲು ಉತ್ತಮವಾದ ಇತರ ಮಾರ್ಗಗಳಿವೆ. ಸ್ವಲ್ಪ ಜಾಣತನ ಮಾತ್ರ ಸಮುದಾಯಕ್ಕೆ ಸಹಾಯವಾಗುತ್ತಿತ್ತು.

ಘಟನೆಯನ್ನು ಅಸಾಮಾನ್ಯವಾಗಿ ನೋಡದಿರುವುದು ಮುಖ್ಯವಾಗಿದೆ. ಮುಸ್ಲಿಮರು ಯಾವಾಗಲೂ ತಮ್ಮ ನಂಬಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. ಸಲ್ಮಾನ್ ರಶ್ದಿಯವರ ಪುಸ್ತಕವನ್ನು ನಿಷೇಧಿಸುವ ಬೇಡಿಕೆಯಾಗಿರಲಿ ಅಥವಾ ತಸ್ಲೀಮಾ ನಸ್ರೀನ್ ಅವರನ್ನು ದೈಹಿಕವಾಗಿ ಹಲ್ಲೆ ಮಾಡಿ ಪಶ್ಚಿಮ ಬಂಗಾಳದಿಂದ ಹೊರಗೆ ಎಸೆಯುವ ಪ್ರಶ್ನೆಯೇ ಆಗಿರಲಿ, ಮುಸ್ಲಿಮರು ತಮ್ಮ ಧಾರ್ಮಿಕ ಬೇಡಿಕೆಗಳನ್ನು ಮನ್ನಿಸಲು ವಿವಿಧ ಸರ್ಕಾರಗಳ ಮೇಲೆ ಯಶಸ್ವಿಯಾಗಿ ಒತ್ತಡ ಹೇರಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಷಾ ಬಾನೊ ಸಮಸ್ಯೆಯ ಸಂದರ್ಭದಲ್ಲಿ ಮುಸ್ಲಿಂ ಪಾದ್ರಿಗಳು ಸಂಸತ್ತನ್ನು ಸುಪ್ರೀಂಕೋರ್ಟ್ ಪ್ರಗತಿಪರ ತೀರ್ಪನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ ಮುಸ್ಲಿಮರ ಅತಿದೊಡ್ಡ ಆಂದೋಲನವನ್ನು ಯಾರೂ ಮರೆಯುವಂತಿಲ್ಲ. ಶಿಕ್ಷಣ ಮತ್ತು ಉದ್ಯೋಗಗಳನ್ನು ಪಡೆಯುವ ಸಲುವಾಗಿ ಮುಸ್ಲಿಮರು ಎಂದಿಗೂ ಚಳುವಳಿ ಮಾಡಿಲ್ಲ ಮತ್ತು ಒಂದುಗೂಡಿಲ್ಲ ಮತ್ತು ಇತರ ನಾಗರಿಕ ಹೋರಾಟಗಳಲ್ಲಿ ಅಷ್ಟೇನೂ ಭಾಗವಹಿಸಿಲ್ಲ ಎಂಬುದು ಇನ್ನೊಂದು ವಿಷಯ. ದೇಶದಲ್ಲಿ ಮುಸ್ಲಿಂ ಆದ್ಯತೆಗಳು ಯಾವಾಗಲೂ ಸ್ಪಷ್ಟವಾಗಿವೆ

ಬೆಂಗಳೂರು ಹಿಂಸಾಚಾರವನ್ನುಕಳೆದ ಆರು ವರ್ಷಗಳಲ್ಲಿಯ ಹತಾಶೆಯ ಒಂದು ಪರಿಣಾಮವೆಂದು ತರ್ಕಬದ್ಧಗೊಳಿಸುತ್ತಿರುವವರಿಗೆ ಮುಸ್ಲಿಂ ರಾಜಕೀಯದ ಬಗ್ಗೆ ಏನೂ ತಿಳಿದಿಲ್ಲ. ನಗರದಲ್ಲಿ ಏನಾಯಿತು ಎಂಬುದು ಮುಸ್ಲಿಮರು ಯಾವಾಗಲೂ ಪ್ರದರ್ಶಿಸುವ ರಾಜಕೀಯ ವರ್ತನೆಯ ಒಂದು ಭಾಗವಾಗಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಕಳೆದ ಆರು ವರ್ಷಗಳ ಅತ್ಯಾಚಾರಗಳಿಗೆ ಇದನ್ನು ಜೋಡಿಸುವ ಅಗತ್ಯವು ಖಂಡಿತವಾಗಿಯೂ ಇಲ್ಲ. ಮುಸ್ಲಿಮರು ಷಾ ಬಾನೊ ಆಂದೋಲನವನ್ನು ಪ್ರಾರಂಭಿಸಿದಾಗ ಬಿಜೆಪಿ ಸರ್ಕಾರ ಇರಲಿಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು.

Also Read:  How Islamic Are ‘Islamic’ Blasphemy Laws?


 

ಪ್ರತಿಯೊಂದು ಧರ್ಮವೂ ತನ್ನ ಅನುಯಾಯಿಗಳಿಗೆ ಪವಿತ್ರವಾಗಿದೆ. ಆದರೆ ಯಾರಾದರೂ ತಮ್ಮ ನಂಬಿಕೆ ಅಥವಾ ಧರ್ಮಚಿಹ್ನೆಯನ್ನು ಖಂಡಿಸಿದಾಗ ಎಲ್ಲಾ ಧರ್ಮಗಳು ಒಂದೇ ರೀತಿ ವರ್ತಿಸುವುದಿಲ್ಲ. ಯೇಸುವನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬರೆಯಲಾಗಿದೆ ಮತ್ತು ಚಿತ್ರಿಸಲಾಗಿದೆ ಮತ್ತು ಕ್ರೈಸ್ತರು ಅಂತಹ ಘಟನೆ ಸಂಭವಿಸಿದಾಗಲೆಲ್ಲಾ ಆಸ್ತಿಗಳನ್ನು ಸುಟ್ಟಿರುವುದನ್ನು ನಾವು ಕಾಣುವುದಿಲ್ಲ. ದೀರ್ಘಕಾಲದವರೆಗೆ, ಹಿಂದೂ ಧರ್ಮವು ತನ್ನ ನಂಬಿಕೆಗಳ ಯಾವುದೇ ಖಂಡನೆಗೆ ಎಂದೂ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ, ವಿಶೇಷವಾಗಿಖಂಡಿಸುವವರು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಾಗಿದ್ದಾಗ ಸೆಮಿಟಿಕ್ ಹಿಂದೂ ಧರ್ಮವು ಪ್ರತಿಕ್ರಿಯಿಸುವುದನ್ನು (ಕೆಲವೊಮ್ಮೆ ಹಿಂಸಾತ್ಮಕವಾಗಿ) ಸಮರ್ಥಿಸಿದ್ದಾರೆ. ಆದರೆ, ಮುಸ್ಲಿಮರು ಯಾವಾಗಲೂ ಇಂತಹ ಘಟನೆಗಳಿಗೆ ಅದಕ್ಕಾಗಿಯೇ ಕಾದಿರುವಂತೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕೋಪವನ್ನು ದೈಹಿಕವಾಗಿ ತೋರಿಸದಿದ್ದರೆ, ಅವರು ಕಡಿಮೆ ಮುಸ್ಲಿಮರಾಗುತ್ತಾರೋ ಎಂಬಂತೆ.

ಇಲ್ಲಿರುವ ಸಮಸ್ಯೆಯೆಂದರೆ ಪ್ರಬಲ ಇಸ್ಲಾಮಿಕ್ ದೇವತಾಶಾಸ್ತ್ರವು ಮುಸ್ಲಿಮರು ಇದೇ ರೀತಿ ವರ್ತಿಸಬೇಕೆಂದು ನಿರೀಕ್ಷಿಸುತ್ತದೆ. ಧರ್ಮನಿಂದೆಗಾಗಿಯ ದಂಡನೆಯ ಬಗ್ಗೆ ಕುರಾನ್ ಸ್ಪಷ್ಟವಾಗಿಲ್ಲದಿದ್ದರೂ, ಧರ್ಮನಿಂದೆಯ ಹತ್ಯೆಯನ್ನು ನ್ಯಾಯಸಮ್ಮತಗೊಳಿಸುವ ಕೆಲವು ಪದ್ಯಗಳನ್ನು ಓದಲಾಗಿದೆ. ಅಲ್ಲದೇ ಪ್ರವಾದಿಯನ್ನು ಖಂಡಿಸುವ ಅಂತಹ ಜನರನ್ನು ಕೊಲ್ಲಬೇಕು ಎಂಬ ವಿದ್ವತ್ಪೂರ್ಣ ಒಮ್ಮತವಿರುವ ಹಡೀಸ್ ಗಳಿವೆ. ಆದ್ದರಿಂದ ಎಲ್ಲ ದೇಶಗಳಲ್ಲಿ ಧರ್ಮನಿಂದೆಯ ಅಪರಾಧಕ್ಕೆ ಮರಣದಂಡನೆ ವಿಧಿಸುವುದರಲ್ಲಿ ಆಶ್ಚರ್ಯವೇನಿಲ್ಲ, ಇದು ಬಹುತೇಕ ಎಲ್ಲ ಮುಸ್ಲಿಂ ರಾಷ್ಟ್ರಗಳಲ್ಲಿ ಸಂಭವಿಸುತ್ತವೆ. ದೇಶಗಳಲ್ಲಿ, ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರು, ಮುಸ್ಲಿಮರು ಮತ್ತು ಇತರರನ್ನು ಇಂತಹ ಕಾನೂನುಗಳ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ. ವಾಸ್ತವವಾಗಿ, ಅಂತಹ ಕಾನೂನುಗಳನ್ನು ನಿರ್ದಿಷ್ಟವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಧರ್ಮನಿಂದೆಯ ಆರೋಪವೆಂದರೆ ಆರೋಪಿಯನ್ನು ತೀವ್ರ ಸಂಕಟಕ್ಕೆ ಸಿಲುಕಿಸಲು ಕಾರಣವಾಗುವ ಆಪಾದನೆಯಾಗಿದೆ. ಇಂಥ ರೀತಿಯ ನಡವಳಿಕೆಗೆ ಧಾರ್ಮಿಕ ಅನುಮತಿಯನ್ನೇ ಪ್ರಶ್ನಿಸುವ ಅವಶ್ಯಕತೆಯಿದೆ.

 

Young men are seen holding hands and ensuring that rioters didn’t attack the temple located in in DJ Halli police station limits in the city.

-----

ಬೆಂಗಳೂರಿನಲ್ಲಿಯ ಪರಿಸ್ಥಿತಿಯು ಖಂಡಿತವಾಗಿಯೂ ತುಂಬಾ ಭಿನ್ನವಾಗಿತ್ತು. ಆರೋಪಿಗಳನ್ನು ಕೊಲ್ಲಲು ಯಾರೂ ಕರೆ ನೀಡುತ್ತಿರಲಿಲ್ಲ. ಕೇವಲ ಪೊಲೀಸರು ಆರಂಭದಲ್ಲಿ ನಿರಾಕರಿಸಿದ ಎಫ್ಐಆರ್ ದಾಖಲಿಸುವದಕ್ಕಾಗಿ ಅವರು ಪ್ರತಿಭಟಿಸುತ್ತಿದ್ದರು. ಕುಪಿತ ಜನಸಮೂಹವು ಹತ್ತಿರದ ಆಸ್ತಿಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ತನ್ನ ಕೋಪವನ್ನು ತೋರಿಸಿತು. ಪೊಲೀಸರ ಗೊಂದಲವನ್ನು ತಗ್ಗಿಸುವ ಪ್ರಯತ್ನವು ಮೂವರು ಮುಸ್ಲಿಂ ಪ್ರತಿಭಟನಾಕಾರರನ್ನು ಕೊಲ್ಲುವುದರಲ್ಲಿ ಅಂತ್ಯಗೊಂಡಿತು. ಭಾರತದಲ್ಲಿ ಎಲ್ಲೆಡೆಯೂ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಪೊಲೀಸ್ ಗುಂಡಿಗೆ ಬಲಿಯಾಗುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂಕಿಅಂಶವನ್ನು ಗಮನಿಸಲಾಗಿ, ಮುಸ್ಲಿಮರು ಜಾಗರೂಕರಾಗಿರಬೇಕಾಗಿತ್ತು ಮತ್ತು ಶಾಂತಿಯುತ ಪ್ರತಿಭಟನೆಯನ್ನು ನಡೆಸಬೇಕಾಗಿತ್ತು. ಆದರೆ, ನಾವು ತಿಳಿದಿರುವಂತೆ ಮತ್ತು ಇಂದಿನವರೆಗೆನ ನಿರೀಕ್ಷೆಯಂತೆ, ಪ್ರವಾದಿಯ ಘನತೆ ಮತ್ತು ಗೌರವವನ್ನು ಪ್ರಶ್ನಿಸಿದಾಗ ಮುಸ್ಲಿಮರು ಎಲ್ಲ ತರ್ಕಬದ್ಧ ವಿಚಾರಗಳನ್ನು ಕಳೆದುಕೊಳ್ಳುತ್ತಾರೆ. ಇದೇ ಹಠಾತ್ ಮತ್ತು ಸಹಜಪ್ರವೃತ್ತಿಯ ಪ್ರತಿಕ್ರಿಯೆಯನ್ನು ಪ್ರಶ್ನಿಸಬೇಕು ಮತ್ತು ಎದುರಿಸಬೇಕು. ವ್ಯಾಪಕವಾದ ಅನುಮೋದನೆ ಮತ್ತು ದೇವತಾಶಾಸ್ತ್ರದ ನ್ಯಾಯಸಮ್ಮತತೆ ಇರುವಾಗ ಪ್ರತಿಕ್ರಿಯೆಯನ್ನು ನಾವು ಹೇಗೆ ಇದಕ್ಕಿಂತ ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು?

ಮುಸ್ಲಿಮರು ದೇವತಾಶಾಸ್ತ್ರದ ಸಂಪ್ರದಾಯಗಳ ಪರ್ಯಾಯ ವ್ಯಾಖ್ಯಾನಗಳೊಂದಿಗೆ ಬಂದಿದ್ದಾರೆ ಮತ್ತು ಪ್ರವಾದಿ ಸ್ವತಃ ಅಂತಹ ಹಿಂಸಾಚಾರವನ್ನು ನಿರಾಕರಿಸುತ್ತಿದ್ದರೆಂದು ವಾದಿಸುತ್ತಿರುವುದು ಗಮನ ಸೆಳೆಯುವ ಆನಂದದ ಸಂಗತಿಯಾಗಿದೆ. ಮುಹಮ್ಮದ್ ತನ್ನನ್ನು ಯಾವಾಗಲೂ ಅವಮಾನಿಸಿದವರನ್ನು ಹೇಗೆ ಕ್ಷಮಿಸಿದ್ದಾನೆಂದು ಅವರು ಮುಸ್ಲಿಮರಿಗೆ ನೆನಪಿಸಿ ಕೊಡುತ್ತಿದ್ದಾರೆ. ಆದಾಗ್ಯೂ, ಎಲ್ಲ ವ್ಯಾಖ್ಯಾನಗಳು ಕೇವಲ ಟ್ವಿಟರ್ ಮತ್ತು ಫೇಸ್ ಬುಕ್ ಪುಟಗಳಲ್ಲಿಯೇ ಉಳಿಯುತ್ತವೆ. ವಾಸ್ತವಿಕ ಜಗತ್ತಿನಲ್ಲಿ, ಮುಸ್ಲಿಂ ಕಲ್ಪನೆ ಮತ್ತು ಕಾರ್ಯಗಳು ಹೆಚ್ಚಾಗಿ ಉಲಮಾಗಳು ಮತ್ತು ಅವರ ಮದರಸಾಗಳಿಂದಲೇ ರೂಪಿಸಲ್ಪಟ್ಟಿವೆ. ಇಂತಹ ಬದಲಿ ವ್ಯಾಖ್ಯಾನಗಳನ್ನು ಅವರು ಎದುರಿಸದ ಹೊರತು, ಹೆಚ್ಚಾಗಿ ಏನೂ ಬದಲಾಗುವುದಿಲ್ಲ.

ಜನಸಮೂಹದ ಉನ್ಮಾದದ ಮಧ್ಯೆ, ಕೆಲವು ಮುಸ್ಲಿಮರು ಸ್ಥಳೀಯ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲು ಬಯಸಿದ್ದರೆಂಬುದು ಕಂಡುಬಂದಿದೆ. ದೇವಾಲಯವನ್ನು ರಕ್ಷಿಸಲು ಇತರ ಮುಸ್ಲಿಮರಿಂದಲೇ ಮಾಡಲಾದ ಮಾನವ ಸರಪಳಿಯಿಂದ ಅವರು ತಡೆಯಲ್ಪಟ್ಟರು. ಇಂತಹ ಧಾರ್ಮಿಕ ಹುಚ್ಚುತನದ ಮಧ್ಯದಲ್ಲಿಯೂ ಸಹ ಮಾನವೀಯತೆ ಮತ್ತು ಪರಾನುಭೂತಿ ಬದುಕಬಲ್ಲದು ಎಂಬುದಕ್ಕೆ ಇದು ಒಂದು ಸಂವೇದನಶೀಲ ಉದಾಹರಣೆಯಾಗಿದೆ. ಮುಸ್ಲಿಮರು ಇಸ್ಲಾಂನಿಂದ ಬೇರೆಯೇ ಪಾಠಗಳನ್ನು ಕಲಿಯುತ್ತಿರಬೇಕು ಎಂಬುದು ಸ್ಪಷ್ಟವಾಗಿದೆ. ಇಸ್ಲಾಂ ಧರ್ಮದ ಇಂತಹುದೇ ವಾಚನಯೋಗ್ಯ ಪಾಠಗಳು ಅಂತಿಮವಾಗಿ ಮುಸ್ಲಿಂ ಸಮಾಜಗಳಲ್ಲಿ ಪ್ರಬಲವಾಗಿ ಓದಲ್ಪಡಬೇಕು.

ಅರ್ಷದ್ ಆಲಂ ಅವರು ನ್ಯೂಏಜ್ಇಸ್ಲಾಮ್.ಕಾಂ ಅಂಕಣಕಾರರಾಗಿದ್ದಾರೆ

English Article:  Bengaluru Muslim Violence: There Is A Need to Question the Islamic Theological Consensus on Blasphemy

URL:   https://www.newageislam.com/kannada-section/bengaluru-muslim-violence-/d/122629

New Age IslamIslam OnlineIslamic WebsiteAfrican Muslim NewsArab World NewsSouth Asia NewsIndian Muslim NewsWorld Muslim NewsWomen in IslamIslamic FeminismArab WomenWomen In ArabIslamophobia in AmericaMuslim Women in WestIslam Women and Feminism

Loading..

Loading..